Governance x Climate Change

Governance & Climate Change in Bengaluru | Climate Charche Podcast

In this final episode of the Climate Charche Podcast, we explore the critical link between governance and climate action in Bengaluru. 

As climate impacts intensify across the city, the conversation asks an important question: Can individual actions solve the climate crisis, or do we need deeper structural and governance reforms?

Host Vishwanath is joined by Bhargavi Rao, an independent researcher, educator, and experiential learning designer who works at the intersection of community action, law, policy, and environmental justice. 

The discussion examines how urban governance structures shape climate resilience in Bengaluru. It highlights how overlapping responsibilities between multiple parastatal agencies often create confusion and distance citizens from decision-making processes.

The episode also reflects on the 74th Constitutional Amendment, participatory democracy, and the need for stronger ward-level governance to make cities more accountable and climate-responsive.

Key themes discussed in this episode include:
• Climate governance and urban planning in Bengaluru
• The role of the 74th Constitutional Amendment and decentralised governance
• Citizen participation in climate decision-making
• Challenges created by fragmented institutions and parastatal agencies
• Rethinking infrastructure, public services, and sustainable city planning

If you’re interested in Bengaluru governance, climate policy, urban planning, or sustainability in Indian cities, this episode offers grounded insights on how cities can build more democratic and climate-resilient governance systems.

Language & Accessibility: This episode is a mix of English and Kannada. Subtitles are available in both languages – turn on CC and select your preferred option.

ಬೆಂಗಳೂರಿನಲ್ಲಿನ ಆಡಳಿತ ಮತ್ತು ಹವಾಮಾನ ಬದಲಾವಣೆ | ಕ್ಲೈಮೇಟ್ ಚರ್ಚೆ ಪಾಡ್‌ಕ್ಯಾಸ್ಟ್

ಕ್ಲೈಮೇಟ್ ಚರ್ಚೆ ಪಾಡ್‌ಕ್ಯಾಸ್ಟ್‌ನ ಈ ಅಂತಿಮ ಸಂಚಿಕೆಯಲ್ಲಿ, ಬೆಂಗಳೂರಿನಲ್ಲಿ ಆಡಳಿತ ಮತ್ತು ಹವಾಮಾನ ಕ್ರಮಗಳ ನಡುವಿನ ಮಹತ್ವದ ಸಂಬಂಧವನ್ನು ನಾವು ಪರಿಶೀಲಿಸುತ್ತೇವೆ.

ನಗರದಾದ್ಯಂತ ಹವಾಮಾನ ಪರಿಣಾಮಗಳು ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಈ ಸಂವಾದವು ಒಂದು ಮುಖ್ಯವಾದ  ಪ್ರಶ್ನೆಯನ್ನು ಮುಂದಿಡುತ್ತದೆ: ವ್ಯಕ್ತಿಗತ ಕ್ರಮಗಳು ಹವಾಮಾನ ಬಿಕ್ಕಟ್ಟನ್ನು ಪರಿಹರಿಸಬಲ್ಲವೇ, ಅಥವಾ ನಮಗೆ ಆಳವಾದ ವ್ಯವಸ್ಥಾತ್ಮಕ ಮತ್ತು ಆಡಳಿತಾತ್ಮಕ ಸುಧಾರಣೆಗಳು ಬೇಕೆ?

ನಿರೂಪಕರಾದ ವಿಶ್ವನಾಥ್ ಅವರೊಂದಿಗೆ ಸ್ವತಂತ್ರ ಸಂಶೋಧಕಿ, ಬೋಧಕಿ ಹಾಗೂ ಪ್ರಯೋಗಾತ್ಮಕ ಕಲಿಕೆಯ ವಿನ್ಯಾಸಗಾರ್ತಿ ಭಾರ್ಗವಿ ರಾವ್ ಸೇರಿಕೊಳ್ಳಲಿದ್ದಾರೆ. ಅವರು ಸಮುದಾಯ ಕ್ರಮ, ಕಾನೂನು, ನೀತಿ ಹಾಗೂ ಪರಿಸರ ನ್ಯಾಯಗಳ ಸಂಧಿಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಚರ್ಚೆಯು ಹೇಗೆ ನಗರ ಆಡಳಿತ ಸ್ವರೂಪಗಳು ಬೆಂಗಳೂರಿನಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ರೂಪಿಸುತ್ತವೆ ಎಂಬುದನ್ನು ಪರಿಶೀಲಿಸುತ್ತವೆ. ಅನೇಕ ಅರೆ-ಸರ್ಕಾರಿ ಸಂಸ್ಥೆಗಳ ನಡುವೆ ಪರಸ್ಪರ ಅತಿಕ್ರಮಿಸುವ ಹೊಣೆಗಾರಿಕೆಗಳು ಆಗಾಗ್ಗೆ ಗೊಂದಲವನ್ನು ಉಂಟುಮಾಡುತ್ತವೆ ಹಾಗೂ ನಾಗರಿಕರನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ದೂರವಿಡುತ್ತವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಈ ಸಂಚಿಕೆಯು ಸಂವಿಧಾನದ 74ನೇ ತಿದ್ದುಪಡಿ, ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಹಾಗೂ ನಗರಗಳನ್ನು ಹೆಚ್ಚು ಉತ್ತರದಾಯಿತ್ವದ ಮತ್ತು ಹವಾಮಾನ-ಸ್ಪಂದನೀಯವಾಗಿಸಲು ಬಲಿಷ್ಠವಾದ ವಾರ್ಡ್-ಮಟ್ಟದ ಆಡಳಿತದ ಅಗತ್ಯದ ಬಗ್ಗೆ ಚಿಂತನೆ ವ್ಯಕ್ತಪಡಿಸುತ್ತದೆ.

ಈ ಸಂಚಿಕೆಯಲ್ಲಿ ಚರ್ಚಿಸಲಾದ ಪ್ರಮುಖವಾದ ವಿಷಯಗಳು:

  • ಹವಾಮಾನ ಆಡಳಿತ ಮತ್ತು ಬೆಂಗಳೂರಿನಲ್ಲಿ ನಗರ ಯೋಜನೆ.
  • ವಿಕೇಂದ್ರೀಕೃತ ಆಡಳಿತ ಮತ್ತು ಸಂವಿಧಾನದ 74ನೇ ತಿದ್ದುಪಡಿಯ ಪಾತ್ರ.
  • ಹವಾಮಾನ ಸಂಬಂಧಿತ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ.
  • ವಿಭಜಿತ ಸಂಸ್ಥೆಗಳು ಮತ್ತು ಅರೆಸರ್ಕಾರಿ ಇಲಾಖೆಗಳು ಹುಟ್ಟುಹಾಕಿರುವ ಸವಾಲುಗಳು.
  • ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು ಮತ್ತು ಸುಸ್ಥಿರವಾದ ನಗರ ಯೋಜನೆಯ ಬಗ್ಗೆ ಮರುಚಿಂತನೆ.

ನಿಮಗೆ ಬೆಂಗಳೂರು ಆಡಳಿತ, ಹವಾಮಾನ ನೀತಿ, ನಗರ ಯೋಜನೆ ಅಥವಾ ಭಾರತೀಯ ನಗರಗಳಲ್ಲಿ ಸುಸ್ಥಿರತೆ ಬಗ್ಗೆ ಆಸಕ್ತಿ ಇದ್ದರೆ, ಸಂಚಿಕೆಯು ನಗರಗಳು ಹೇಗೆ ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಹವಾಮಾನಸ್ಥಿತಿಸ್ಥಾಪಕ ಆಡಳಿತ ವ್ಯವಸ್ಥೆಗಳನ್ನು ನಿರ್ಮಿಸಬಹುದು ಎಂಬುದರ ಕುರಿತು ತಳಮಟ್ಟದ ಒಳನೋಟಗಳನ್ನು ಒದಗಿಸುತ್ತದೆ

ಭಾಷೆ ಮತ್ತು ದೊರೆಯುವಿಕೆ:

ಈ ಸಂಚಿಕೆಯ ಸಂಭಾಷಣೆ ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಮಿಶ್ರಣವಾಗಿದೆ. ಎರಡೂ ಭಾಷೆಗಳಲ್ಲಿ ಅಡಿಬರಹಗಳು ಲಭ್ಯವಿದೆ. – CCಯನ್ನು ಆನ್ ಮಾಡಿ, ನಿಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಿ.

Episode Guest | ಸಂಚಿಕೆ ಅತಿಥಿ

Bhargavi S Rao

Bhargavi S Rao works at the intersection of community action, law, policy, planning, and governance, bridging grassroots realities with decision-making spaces. her work spans research, advocacy, campaigns, and teaching, all aimed at advancing environmental and social justice in India and South Asia.

As an independent researcher, educator, experiential learning designer, facilitator, and outdoor pedagogue, she creates and leads programmes that connect climate change, human rights, livelihoods, and governance in ways that are practical, inclusive, and deeply rooted in lived experiences. Her approach blends field engagement with policy insights, helping students, professionals, and community leaders translate knowledge into meaningful action.

She is passionate about driving climate action while advocating for the rights and needs of vulnerable communities. From leading climate resilience workshops with women workers in South Asia, to supporting young entrepreneurs building sustainable solutions, to writing for national dailies, she focuses on fostering resilience, equity, and collaboration.

ಭಾರ್ಗವಿ ಎಸ್. ರಾವ್

ಭಾರ್ಗವಿ ಎಸ್. ರಾವ್ ಸಮುದಾಯ ಕ್ರಿಯಾಶೀಲತೆ, ಕಾನೂನು, ನೀತಿ, ಯೋಜನೆ ಮತ್ತು ಆಡಳಿತಗಳ ಕ್ಷೇತ್ರಗಳಲ್ಲಿ ನಿರತರಾಗಿದ್ದು, ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ನೆಲಮಟ್ಟದ ವಾಸ್ತವತೆಗಳನ್ನು ಬೆಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಸಂಶೋಧನೆ, ವಕಾಲತ್ತು, ಅಭಿಯಾನ, ಮತ್ತು ಬೋಧನೆಗಳಲ್ಲಿ ತೊಡಗಿಸಿಕೊಂಡಿದ್ದು, ಇದರ ಉದ್ದೇಶ ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ ಪರಿಸರ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವಲ್ಲಿ ಕಾರ್ಯನಿರತರಾಗಿದ್ದಾರೆ. 

ಸ್ವತಂತ್ರ ಸಂಶೋಧಕಿ, ಶಿಕ್ಷಕಿ, ಅನುಭವಾಧಾರಿತ ಕಲಿಕೆಯ ವಿನ್ಯಾಸಕಿ, ಮಾರ್ಗದರ್ಶಕಿ ಮತ್ತು ಬಾಹ್ಯ ಶಿಕ್ಷಣ ತಜ್ಞೆ ಆಗಿರುವ ಭಾರ್ಗವಿ ಅವರು, ಹವಾಮಾನ ಬದಲಾವಣೆ, ಮಾನವ ಹಕ್ಕು, ಜೀವನೋಪಾಯ ಮತ್ತು ಆಡಳಿತ, ಇವುಗಳನ್ನು ಅನುಭವಾಧಾರಿತ, ಸಮಾವೇಶಿತ ಮತ್ತು ಕಾರ್ಯೋಚಿತ ರೀತಿಯಲ್ಲಿ ಸಂಪರ್ಕಿಸುವ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ, ಮುನ್ನಡೆಸುತ್ತಾರೆ. ಕ್ಷೇತ್ರ ಮಟ್ಟದ ಪಾಲ್ಗೊಳ್ಳುವಿಕೆ ನೀತಿ-ಆಧಾರಿತ ಅರಿವುಗಳನ್ನು ಸಂಯೋಜಿಸುವುದರ ಮೂಲಕ, ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಮುದಾಯ ನಾಯಕರು ತಮ್ಮ ಜ್ಞಾನವನ್ನು ಅರ್ಥಪೂರ್ಣ ಕ್ರಿಯಾಶೀಲತೆಯಾಗಿ ಪರಿವರ್ತಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹವಾಮಾನಕ್ಕೆ ಸಂಬಂಧಿಸಿದ ಕ್ರಿಯೆಗಳನ್ನು ಸಪ್ರೇಮದಿಂದ ಮುನ್ನಡೆಸುವಲ್ಲಿ ತೀವ್ರ ಆಸಕ್ತಿ ಹೊಂದಿರುವ ಇವರು, ದುರ್ಬಲ ಸಮುದಾಯ ಹಕ್ಕುಗಳು ಮತ್ತು ಅಗತ್ಯಗಳ ಪರವಾಗಿ ಹೋರಾಡುತ್ತಿದ್ದಾರೆ. ದಕ್ಷಿಣ ಏಷ್ಯಾದ ಮಹಿಳಾ ಕಾರ್ಮಿಕರೊಂದಿಗೆ ಹವಾಮಾನ ಸಹಿಷ್ಣುತೆ ಕಾರ್ಯಾಗಾರಗಳನ್ನು ನಡೆಸುವ, ಸ್ಥಿರ ಪರಿಹಾರಗಳನ್ನು ರೂಪಿಸುತ್ತಿರುವ ಯುವ ಉದ್ಯಮಿಗಳಿಗೆ ಬೆಂಬಲ ನೀಡುವ, ಮತ್ತು ರಾಷ್ಟ್ರೀಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದನ್ನೂ ಒಳಗೊಂಡಂತೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ರುವ ಇವರು, ಸಹಿಷ್ಣುತೆ, ಸಮಾನತೆ ಮತ್ತು ಸಹಕಾರಗಳನ್ನು ಉತ್ತೇಜಿಸುವ, ಹವಾಮಾನ ಮತ್ತು ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Stay connected with BSF:

ಬಿಎಸ್‌ಎಫ್‌ನೊಂದಿಗೆ ಸಂಪರ್ಕದಲ್ಲಿರಿ: