Biodiversity x Climate Change
Biodiversity & Climate Change in Bengaluru | Climate Charche Podcast
How is Bengaluru’s biodiversity changing—and what does climate change have to do with it?
In this episode of the Climate Charche Podcast, Vishwanath S (Biome) speaks with Dr. Jagdish Krishnaswamy (IIHS) and Sunil Ramareddy (Environmental Engineer & Conservation Practitioner) to explore the deep connections between urban biodiversity, water bodies, wetlands, ecological design, and the future liveability of Bengaluru.
As global warming intensifies and the city expands, Bengaluru’s ecosystems—trees, lakes, wetlands, birds, bats, butterflies, and even backyard pollinators—are under increasing stress. This conversation breaks down:
- What biodiversity means in the Bengaluru context—from iconic trees to urban wildlife
- How climate change, heat stress, and the urban heat island effect are already altering species behaviour
- Why lakes, wetlands, and peri-urban ecosystems are critical for ecological and climate resilience, and what are biodiversity-friendly approaches to lake restoration, wetland design, and water governance
- How Cauvery basin’s health and Western Ghats ecosystems directly affect Bengaluru’s water security
- The role of communities, campuses, ward committees, and citizen science in restoring urban nature
- Why decentralised planning, native species nurseries, and biodiversity registers can shape a more resilient Bengaluru
Language & Accessibility: The conversation in this episode is a mix of English and Kannada. Subtitles are available in both languages – turn on CC and select your preferred option.
ಬೆಂಗಳೂರಿನಲ್ಲಿನ ಜೀವವೈವಿಧ್ಯ ಮತ್ತು ಹವಾಮಾನ ಬದಲಾವಣೆ | ಕ್ಲೈಮೇಟ್ ಚರ್ಚೆ ಪಾಡ್ಕ್ಯಾಸ್ಟ್
ಬೆಂಗಳೂರಿನ ಜೀವವೈವಿಧ್ಯ ಹೇಗೆ ಬದಲಾಗುತ್ತಿದೆ—ಮತ್ತು ಹವಾಮಾನ ಬದಲಾವಣೆಗೂ ಅದಕ್ಕೂ ಏನು ಸಂಬಂಧ?
ಕ್ಲೈಮೇಟ್ ಚರ್ಚೆ ಪಾಡ್ಕ್ಯಾಸ್ಟ್ನ ಈ ಸಂಚಿಕೆಯಲ್ಲಿ, ನಗರ ಜೀವವೈವಿಧ್ಯ, ಜಲಮೂಲ, ಜೌಗು ಪ್ರದೇಶ, ಪರಿಸರ ವಿನ್ಯಾಸ ಮತ್ತು ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಮಾಡುವ ಸ್ಥಿತಿಗತಿಗಳ ನಡುವಿನ ಆಳವಾದ ಸಂಬಂಧಗಳನ್ನು ಅನ್ವೇಷಿಸಲು ವಿಶ್ವನಾಥ್ ಎಸ್ (ಬಯೋಮ್) ಅವರು ಡಾ. ಜಗದೀಶ್ ಕೃಷ್ಣಸ್ವಾಮಿ (ಐಐಎಚ್ಎಸ್) ಮತ್ತು ಸುನಿಲ್ ರಾಮರೆಡ್ಡಿ (ಪರಿಸರ ಎಂಜಿನಿಯರ್ ಮತ್ತು ಸಂರಕ್ಷಣಾ ವೈದ್ಯರು) ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾರೆ.
ಜಾಗತಿಕ ತಾಪಮಾನದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದ್ದು, ನಗರ ವಿಸ್ತಾರಗೊಳ್ಳುತ್ತಿದ್ದಂತೆ, ಬೆಂಗಳೂರಿನ ಪರಿಸರ ವ್ಯವಸ್ಥೆ – ಮರಗಳು, ಕೆರೆಗಳು, ಜೌಗು ಪ್ರದೇಶಗಳು, ಪಕ್ಷಿ, ಬಾವಲಿ, ಚಿಟ್ಟೆ ಮತ್ತು ಮನೆಯಂಗಳದಲ್ಲಿ ನಡೆಯುವ ಪರಾಗಸ್ಪರ್ಶಕಗಳು – ಎಲ್ಲದರ ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಸಂಭಾಷಣೆ ಈ ಕೆಳಗಿನವುಗಳನ್ನು ವಿವರಿಸುತ್ತದೆ:
- ಬೆಂಗಳೂರಿನ ಸಂದರ್ಭದಲ್ಲಿ ಜೀವವೈವಿಧ್ಯತೆ ಅಂದರೇನು? – ಖ್ಯಾತ ಮರಗಳಿಂದ ನಗರ ವನ್ಯಜೀವಿಗಳವರೆಗೆ
- ಹವಾಮಾನ ಬದಲಾವಣೆ, ಶಾಖದ ಒತ್ತಡ ಮತ್ತು ನಗರದಲ್ಲಿನ ಉಷ್ಣ ದ್ವೀಪ ಪರಿಣಾಮವು ಯಾವ ರೀತಿಯಲ್ಲಿ ವಿವಿಧ ಜೀವಿಗಳ ನಡುವಳಿಕೆಯನ್ನು ಬದಲಾಯಿಸುತ್ತಿದೆ.
- ಕೆರೆಗ, ಜೌಗು ಪ್ರದೇಶ ಮತ್ತು ಅರೆ-ನಗರ ಪರಿಸರ ವ್ಯವಸ್ಥೆಗಳು ಯಾವ ರೀತಿಯಲ್ಲಿ ಪರಿಸರ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ನಿರ್ಣಾಯಕವಾಗಿವೆ ಹಾಗೂ ಕೆರೆಗಳ ಪುನಃಸ್ಥಾಪನೆ, ಜೌಗು ಪ್ರದೇಶ ವಿನ್ಯಾಸ ಮತ್ತು ನೀರಿನ ಆಡಳಿತ ನಡೆಸುವ ನಿಟ್ಟಿನಲ್ಲಿ ಜೀವವೈವಿಧ್ಯ ಸ್ನೇಹಿ ವಿಧಾನಗಳು ಯಾವುವು
- ಕಾವೇರಿ ಜಲಾನಯನ ಪ್ರದೇಶದ ಆರೋಗ್ಯ ಮತ್ತು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗಳು ಯಾವ ರೀತಿಯಲ್ಲಿ ಬೆಂಗಳೂರಿನಲ್ಲಿನ ನೀರಿನ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿವೆ.
- ನಗರ ಪ್ರಕೃತಿಯನ್ನು ಪುನಃಸ್ಥಾಪಿಸುವಲ್ಲಿ ಸಮುದಾಯ, ಕ್ಯಾಂಪಸ್, ವಾರ್ಡ್ ಸಮಿತಿಗಳು ಮತ್ತು ನಾಗರಿಕ ವಿಜ್ಞಾನದ ಪಾತ್ರವೇನು
- ಯಾವ ಕಾರಣಗಳಿಂದ ವಿಕೇಂದ್ರೀಕೃತ ಯೋಜನೆ, ಸ್ಥಳೀಯ ಪ್ರಬೇಧಗಳ ಸಸ್ಯಾಗಾರಗಳು ಮತ್ತು ಜೀವವೈವಿಧ್ಯ ನೋಂದಣಿಗಳು ಸುಸ್ಥಿರ ಬೆಂಗಳೂರನ್ನು ರೂಪಿಸಬಹುದು
ಭಾಷೆ ಮತ್ತು ಲಭ್ಯತೆ: ಈ ಸಂಚಿಕೆಯ ಸಂಭಾಷಣೆ ಇಂಗ್ಲಿಷ್ ಮತ್ತು ಕನ್ನಡದ ಮಿಶ್ರಣವಾಗಿದೆ. ಉಪಶೀರ್ಷಿಕೆಗಳು ಎರಡೂ ಭಾಷೆಗಳಲ್ಲಿ ಲಭ್ಯವಿದೆ – CC (ಕ್ಲೋಸ್ಡ್ ಕ್ಯಾಪ್ಷನ್) ಆನ್ ಮಾಡಿ ಮತ್ತು ನಿಮ್ಮ ಆದ್ಯತೆಯ ಭಾಷೆ ಆಯ್ಕೆ ಮಾಡಿ.
Episode Guests
Dr Jagdish Krishnaswamy
An ecohydrologist and a landscape ecologist, Dr Jagdish’s work in climate science and impact of extreme rain and warming on ecosystems across India as well as his policy relevant work in conservation planning led to his nomination for the scoping and design of the IPCC Special Report on Land and Climate. He was the coordinating lead author for the Special Report’s Chapter 7 : Risk management and decision making in relation to sustainable development — Special Report on Climate Change and Land. He is one of the few scientists from across the world who has been involved with both the Intergovernmental Panel on Climate Change (IPCC) as well as Intergovernmental Science-Policy Platform on Biodiversity and Ecosystem Services (IPBES).
Jagdish’s work in research and practice straddles the social-ecological continuum from the semi-wild to mega-cities. His work on conservation science and planning contributed to the nomination of the Western Ghats biodiversity hotspot as a UNESCO World Heritage Site. He was part of the team that wrote the National Mission on Biodiversity and Human Well-being, one of the national missions set up by the Principal Scientific Advisor to the Prime Minister’s Office.
At IIHS, Jagdish as a Dean, is helping build the School of Environment and Sustainability, and leading a team that is building a Long-Term Urban Ecological Observatory in Bengaluru, the first of its kind for a mega-city in the Global South.
ಜಗದೀಶ ಕೃಷ್ಣಸ್ವಾಮಿ ಅವರು ಪರಿಸರ ಜಲಶಾಸ್ತ್ರಜ್ಞ ಹಾಗೂ ಭೂದೃಶ್ಯ ಪರಿಸರಶಾಸ್ತ್ರಜ್ಞರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬೈಯಿಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್, ಹಾಗೂ ಸ್ಟಾಟಿಸ್ಟಿಕ್ಸ್ ಮತ್ತು ಡಿಸಿಷನ್ ಸೈನ್ಸ್ನಲ್ಲಿ ಎಂ.ಎಸ್., ಹಾಗೂ ಪರಿಸರ ವಿಜ್ಞಾನದಲ್ಲಿ ಪಿಎಚ್ಡಿ ಪದವಿಗಳನ್ನು ಅಮೆರಿಕದ ನಾರ್ತ್ ಕ್ಯಾರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
ಅವರ ಸಂಶೋಧನೆಗಳು ಹವಾಮಾನ ವಿಜ್ಞಾನ, ಮತ್ತು ಅತಿವೃಷ್ಟಿ ಹಾಗೂ ಉಷ್ಣವರ್ಧನೆಯ ಪರಿಣಾಮಗಳು ಭಾರತದ ಪರಿಸರ ವ್ಯವಸ್ಥೆಗಳಿಗೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ಕೇಂದ್ರೀಕೃತವಾಗಿವೆ. ಅಲ್ಲದೆ, ಅವರ ಸಂರಕ್ಷಣಾ ಯೋಜನೆಗೆ ಸಂಬಂಧಿಸಿದ ನೀತಿ-ಆಧಾರಿತ ಕಾರ್ಯಗಳ ಕಾರಣದಿಂದ ಅವರನ್ನು IPCCನ “Land and Climate” ವಿಶೇಷ ವರದಿಯ ವಿನ್ಯಾಸ ಮತ್ತು ವ್ಯಾಪ್ತಿ ನಿಗದಿಗೆ ನಾಮಾಂಕನಗೊಳಿಸಲಾಯಿತು. ಅವರು ಆ ವಿಶೇಷ ವರದಿಯ ಅಧ್ಯಾಯ 7ಗೆ ಸಂಯೋಜನಾ ಮುಖ್ಯ ಲೇಖಕರಾಗಿ ಕಾರ್ಯನಿರ್ವಹಿಸಿದರು. ಅವರು IPCC ಮತ್ತು IPBES ಎರಡರಲ್ಲಿಯೂ ಕೆಲಸ ಮಾಡಿದ ವಿಶ್ವದ ಕೆಲವೇ ಕೆಲವು ವಿಜ್ಞಾನಿಗಳಲ್ಲಿ ಒಬ್ಬರು.
ಜಗದೀಶ ಅವರ ಸಂಶೋಧನೆ ಮತ್ತು ಕಾರ್ಯಪ್ರಯೋಗಗಳು ಅರೆಗಾಡು ಪ್ರದೇಶಗಳಿಂದ ಹಿಡಿದು ಮಹಾನಗರಗಳವರೆಗೆ ವ್ಯಾಪಿಸಿದ ಸಾಮಾಜಿಕ–ಪಾರಿಸರಿಕ ತಂತುವಿನ ಎಲ್ಲ ಹಂತಗಳನ್ನೂ ಸ್ಪರ್ಶಿಸುತ್ತವೆ. ಐಐಎಚ್ ಎಸ್ ನ ಡೀನ್ ಆಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್, ಸ್ಕೂಲ್ ಆಫ್ ಎನ್ವಿರಾನ್ ಮೆಂಟ್ ಅಂಡ್ ಸಸ್ಟೈನಬಿಲಿಟಿಯ ನಿರ್ಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ; ಅಲ್ಲದೇ ದೀರ್ಘಕಾಲೀನ ನಗರ ಪಾರಿಸರಿಕ ವೀಕ್ಷಣಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿರುವ ತಂಡವನ್ನು ಮುನ್ನಡೆಸುತ್ತಿದ್ದು, ಇದು ಗ್ಲೋಬಲ್ ಸೌತ್ ನಲ್ಲಿಯೇ ಮೊಟ್ಟಮೊದಲ ರೀತಿಯ ಮಹಾನಗರವಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ.
Sunil Ramareddy
An environmental engineer and conservation practitioner based in Bangalore, Sunil is passionately working to restore and protect the city’s natural ecosystems. With over four years of hands-on experience in waterbody rejuvenation and watershed management, Sunil has contributed to the revival of more than 15 lakes across Bangalore, overseeing every stage – from design and planning to implementation and long-term monitoring.
As a Board Member of the Wildlife Conservation Group (WCG), Sunil supports initiatives that promote sustainability, wildlife conservation, and community engagement. Through WCG’s outreach programs, over 1,000 government school students have been engaged in environmental education and awareness initiatives, nurturing a new generation of environmentally conscious citizens.
Sunil has also made a significant impact in wildlife conservation, in six waterholes within Bannerghatta National Park, Thurahalli Forest, North Cauvery wildlife sanctuary and the Bannerghatta Herbivore Safari, ensuring vital water availability for wild animals during dry seasons. His approach combines engineering expertise with ecological sensitivity, focusing on nature-based and community-driven solutions that enhance ecosystem resilience.
With his engineering expertise, Sunil continues to expand his technical understanding of hydrology, watershed systems, and sustainable urban management. Outside his professional pursuits, he is an avid runner, swimmer, and football player, bringing the same discipline and endurance to his conservation mission.
His long-term vision is to support Bangalore in restoring its lakes to function naturally through nature-based solutions and to conserve the vital landscape of Bannerghatta National Park, ensuring harmony between urban development and ecological integrity for generations to come
ಸುನಿಲ್ ರಾಮರೆಡ್ಡಿ ಅವರು ಪರಿಸರ ಇಂಜಿನಿಯರ್ ಮತ್ತು ಸಂರಕ್ಷಣಾ ಅಭ್ಯಾಸಿ. ಅವರು ನಗರ ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ರಕ್ಷಿಸುವ ಬಗ್ಗೆ ಸಪ್ರೇಮದಿಂದ ಕಾರ್ಯನಿರತರಾಗಿದ್ದಾರೆ. ಜಲಮೂಲಗಳ ಪುನರುಜ್ಜೀವನ ಮತ್ತು ಜಲಾವರಣ ನಿರ್ವಹಣೆಯಲ್ಲಿ ನಾಲ್ಕು ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಇವರು, ಬೆಂಗಳೂರಿನಾದ್ಯಂತ,15 ಕ್ಕೂ ಹೆಚ್ಚು ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ವಿನ್ಯಾಸ, ಯೋಜನೆ, ಅನುಷ್ಠಾನದಿಂದ ಹಿಡಿದು ದೀರ್ಘಕಾಲಿಕ ನಿಗಾವಣೆಯವರೆಗೆ ಎಲ್ಲ ಹಂತಗಳಲ್ಲಿಯೂ ಸಕ್ರಿಯ ಪಾತ್ರವಹಿಸಿದ್ದಾರೆ.
ಸಾರ್ವಜನಿಕ ದತ್ತಿ ಟ್ರಸ್ಟ್ “ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG)” ನ ಬೋರ್ಡ್ ಸದಸ್ಯರಾಗಿರುವ ಇವರು ಸುಸ್ಥಿರತೆ, ವನ್ಯಜೀವಿ ಸಂರಕ್ಷಣೆ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉಪಕ್ರಮಗಳನ್ನು ಬೆಂಬಲಿಸುತ್ತಾರೆ.
WCGಯ ಜನಜಾಗೃತಿ ಕಾರ್ಯಕ್ರಮಗಳ ಮೂಲಕ 1,000 ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪರಿಸರ ಶಿಕ್ಷಣ ಮತ್ತು ಜಾಗೃತಿಯ ಚಟುವಟಿಕೆಯಲ್ಲಿ ಭಾಗವಹಿಸಿದ್ದು, ಮುಂದಿನ ಪೀಳಿಗೆಗಳು ಪರಿಸರ ಪ್ರೇಮಿಗಳಾಗಿ, ಜಾಗೃತರಾಗುವ ನಿಟ್ಟಿನಲ್ಲಿ ಇದು ಯಶಸ್ವಿ ಯೋಜನೆಯಾಗಿದೆ.
ಸುನಿಲ್ ಅವರು ವನ್ಯಜೀವಿ ಸಂರಕ್ಷಣೆಯಲ್ಲಿಯೂ ಪ್ರಮುಖ ಕೊಡುಗೆ ನೀಡಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ತುರಹಳ್ಳಿ ಅರಣ್ಯ, ಉತ್ತರ ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಬನ್ನೇರುಘಟ್ಟ ಶಾಕಾಹಾರಿ ಸಫಾರಿ ಪ್ರದೇಶಗಳಲ್ಲಿ ಒಟ್ಟು ಆರು ಜಲಮೂಲಗಳನ್ನು ನಿರ್ಮಿಸಿದ್ದಾರೆ, ಇದರಿಂದ ಬಿಸಿಲು ಕಾಲದಲ್ಲಿ ವನ್ಯಪ್ರಾಣಿಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಖಚಿತವಾಗಿದೆ. ಇಂಜಿನಿಯರಿಂಗ್ ಪರಿಣತಿಯನ್ನು ಪರಿಸರದ ಸೂಕ್ಷ್ಮತೆಯೊಂದಿಗೆ ಸಂಯೋಜಿಸಿ, ಪ್ರಕೃತಿ ಆಧಾರಿತ ಮತ್ತು ಸಮುದಾಯ ಚಾಲಿತ ಪರಿಹಾರಗಳ ಮೂಲಕ ಪರಿಸರ ವ್ಯವಸ್ಥೆಯ ತಾಳ್ಮೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇವರು ಕಾರ್ಯನಿರತರಾಗಿದ್ದಾರೆ.
Join the Conversation!
Dr. Jagdish Krishnaswamy says ‘The only other message I wanted to share was that addressing non-climatic stressors and drivers of biodiversity loss and human-wellness is equally important even as we grapple with new challenges that climate change is bringing in.’
What biodiversity issues matter most in your neighbourhood?
Share your thoughts: bsf@ncbs.res.in
ಈ ಸಂವಾದದಲ್ಲಿ ನೀವೂ ಸೇರಿಕೊಳ್ಳಿ !
ಡಾ. ಜಗದೀಶ್ ಅವರ ಪ್ರಕಾರ ‘ನಾನು ಹೇಳಲು ಬಯಸುವ ಮತ್ತೊಂದು ಸಂದೇಶವೆಂದರೆ, ಹವಾಮಾನವಲ್ಲದ ಒತ್ತಡಕಾರಕಗಳು ಮತ್ತು ಜೀವವೈವಿಧ್ಯ ನಷ್ಟದ ಕಾರಕಗಳನ್ನು ಉದ್ದೇಶಿಸುವುದು ಮಾತ್ರವಲ್ಲದೇ, ಹವಾಮಾನ ಬದಲಾವಣೆಯ ಕಾರಣದಿಂದ ಪ್ರತಿದಿನ ನಾವು ಎದುರಿಸುತ್ತಿರುವ ಸವಾಲುಗಳ ಸನ್ನಿವೇಶದಲ್ಲಿ ಮಾನವ-ಒಳಿತೂ ಸಹ ಅಷ್ಟೇ ಪ್ರಮುಖವಾದ ಸ್ಥಾನ ಪಡೆದುಕೊಂಡಿದೆ.
ನಿಮ್ಮ ನೆರೆಹೊರೆಯಲ್ಲಿ ಯಾವ ಜೀವವೈವಿಧ್ಯ ಸಮಸ್ಯೆಗಳು ಹೆಚ್ಚು ಮುಖ್ಯವಾಗಿವೆ?
ನಿಮ್ಮ ಅಭಿಪ್ರಾಯಗಳನ್ನು ಇಲ್ಲಿಗೆ ಕಳುಹಿಸಿ: bsf@ncbs.res.in