Livelihood x Climate Change

How is climate change affecting livelihoods in Bengaluru?

In this episode of the Climate Charche Podcast, we explore the growing links between climate change, urbanisation, and livelihoods in one of India’s fastest-growing cities.

As Bengaluru expands rapidly, changing weather patterns—from rising heat to untimely rainfall—are reshaping how people live and work. For thousands of workers in sectors such as garment manufacturing, construction, street vending, and other informal jobs, climate stress is becoming a daily reality, affecting health, safety, and economic security.
Joining the conversation are Aruna Kumari, Senior Field Officer at Cividep India, who works on labour rights, occupational safety, and women workers’ issues, and Dr. Gayathri Vasudevan, Chief Impact Officer at Sambhav Foundation, a leader in skilling, livelihoods, and community development.

Together, they discuss how climate impacts are experienced on factory floors, in industrial areas, and across informal workplaces in the city.
Key themes discussed in this episode:

  • Climate change and livelihoods in Bengaluru
  • Heat stress, changing weather patterns, and worker safety
  • Gendered impacts on women workers in the garment sector
  • Feminization of sectors and changing labour patterns in industries
  • Informal labour and urban vulnerability
  • The right to liveable cities and just economic transitions
  • Why climate resilience must include workers and livelihoods

If you are interested in Bengaluru, climate change, sustainability, labour rights, and urban livelihoods, this conversation offers grounded insights into building a more just and climate-resilient city.
Watch the full episode and join the conversation.

Language & Accessibility: This episode is a mix of English and Kannada. Subtitles are available in both languages – turn on CC and select your preferred option.

ಹವಾಮಾನ ಬದಲಾವಣೆಯು ಹೇಗೆ ಬೆಂಗಳೂರಿನಲ್ಲಿ ಜೀವನೋಪಾಯಗಳ ಮೇಲೆ ಪ್ರಭಾವ ಬೀರುತ್ತಿದೆ?

ಕ್ಲೈಮೇಟ್ ಚರ್ಚೆ ಪಾಡ್‌ಕ್ಯಾಸ್ಟ್‌ನ ಈ ಸಂಚಿಕೆಯಲ್ಲಿ ನಾವು, ಭಾರತದ ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ, ಹವಾಮಾನ ಬದಲಾವಣೆ, ನಗರೀಕರಣ, ಮತ್ತು ಜೀವನೋಪಾಯಗಳ ನಡುವೆ ಹೆಚ್ಚುತ್ತಿರುವ ನಂಟನ್ನು ಪರಿಶೀಲಿಸೋಣ.

ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವಂತೆ, ತಾಪಮಾನದ ಏರಿಕೆಯಿಂದ ಹಿಡಿದು ಅಕಾಲಿಕ ಮಳೆಯವರೆಗೆ ಹವಾಮಾನ ವೈಖರಿಯಲ್ಲಿನ ಬದಲಾವಣೆಗಳು ಜನರ ಬದುಕು ಮತ್ತು ಉದ್ಯೋಗಗಳನ್ನು ಮರುರೂಪಿಸುತ್ತಿವೆ.

ಸಿದ್ಧಉಡುಪು ಕಾರ್ಖಾನೆ, ಕಟ್ಟಡ ನಿರ್ಮಾಣ, ಬೀದಿ ಬದಿ ವ್ಯಾಪಾರ ಮತ್ತು ಇನ್ನಿತರ ಅನೌಪಚಾರಿಕ ಉದ್ಯೋಗಗಳಂತಹ ವಲಯಗಳಲ್ಲಿನ ಸಾವಿರಾರು ಉದ್ಯೋಗಿಗಳಿಗೆ, ಹವಾಮಾನ ಒತ್ತಡವೆನ್ನುವುದು ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಭದ್ರತೆಗಳ ದೈನಂದಿನ ವಾಸ್ತವವಾಗುತ್ತಿದೆ. ಈ ಸಂವಾದದಲ್ಲಿ ನಮ್ಮೊಂದಿಗೆ ಸಿವಿಡೆಪ್ ಇಂಡಿಯಾ ಸಂಸ್ಥೆಯ ಹಿರಿಯ ಕ್ಷೇತ್ರೀಯ ಅಧಿಕಾರಿಯಾದ ಹಾಗೂ ಕಾರ್ಮಿಕರ ಹಕ್ಕುಗಳು, ಔದ್ಯೋಗಿಕ ಸುರಕ್ಷತೆ ಹಾಗೂ ಮಹಿಳಾ ಉದ್ಯೋಗಿಗಳ ಸಮಸ್ಯೆಗಳ ಕುರಿತು ಕೆಲಸ ಮಾಡುತ್ತಿರುವ ಅರುಣ ಕುಮಾರಿ ಮತ್ತು ಸಂಭವ್ ಫೌಂಡೇಷನ್‌ನಲ್ಲಿ ಮುಖ್ಯ ಪರಿಣಾಮ ಅಧಿಕಾರಿಯಾಗಿರುವ ಹಾಗೂ ಕೌಶಲ್ಯ, ಜೀವನೋಪಾಯ ಮತ್ತು ಸಮುದಾಯ ಅಭಿವೃದ್ಧಿಗಳಲ್ಲಿ ಮುಂದಾಳುಗಳಾಗಿರುವ ಡಾ. ಗಾಯತ್ರಿ ವಾಸುದೇವನ್ ಅವರುಗಳು ಇರಲಿದ್ದಾರೆ,

ಅವರು ನಗರದಲ್ಲಿನ ಕಾರ್ಖಾನೆಯ ಅಂಗಳದಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ಅನೌಪಚಾರಿಕ ಕೆಲಸದ ಜಾಗಗಳಲ್ಲಿ ಹೇಗೆ ಹವಾಮಾನ ಪರಿಣಾಮಗಳು ಅನುಭವಕ್ಕೆ ಬರುತ್ತಿವೆ ಎಂಬುದನ್ನು ಚರ್ಚಿಸಲಿದ್ದಾರೆ.

ಈ ಸಂಚಿಕೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು:

  • ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆ ಮತ್ತು ಜೀವನೋಪಾಯ.
  • ತಾಪಮಾನ ಒತ್ತಡ, ಬದಲಾಗುತ್ತಿರುವ ಹವಾಮಾನ ವೈಖರಿಗಳು ಮತ್ತು ಕಾರ್ಮಿಕ ಸುರಕ್ಷಿತೆ.
  • ಸಿದ್ಧಉಡುಪು ಉತ್ಪಾದನಾ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಲಿಂಗಾಧಾರಿತ ಪರಿಣಾಮಗಳು.
  • ವಲಯಗಳ ಮಹಿಳಾಕರಣ ಮತ್ತು ಕೈಗಾರಿಕೆಗಳಲ್ಲಿ ಬದಲಾಗುತ್ತಿರುವ ಕಾರ್ಮಿಕ ಮಾದರಿಗಳು.
  • ಅನೌಪಚಾರಿಕ ಕಾರ್ಮಿಕರು ಮತ್ತು ನಗರ ದುರ್ಬಲತೆ.
  • ವಾಸಯೋಗ್ಯ ನಗರಗಳು ಮತ್ತು ಆರ್ಥಿಕ ಪರಿವರ್ತನೆಗಳ ಹಕ್ಕು.
  • ಹವಾಮಾನ ಸ್ಥಿತಿಸ್ಥಾಪಕತ್ವವು ಏಕೆ ಕಾರ್ಮಿಕರನ್ನು ಮತ್ತು ಜೀವನೋಪಾಯಗಳನ್ನು ಒಳಗೊಳ್ಳಲೇಬೇಕು?

ನೀವು ಬೆಂಗಳೂರು, ಹವಾಮಾನ ಬದಲಾವಣೆ, ಸುಸ್ಥಿರತೆ, ಕಾರ್ಮಿಕ ಹಕ್ಕುಗಳು ಮತ್ತು ನಗರ ಜೀವನೋಪಾಯಗಳ ಬಗ್ಗೆ ಆಸಕ್ತಿ ಹೊಂದಿದ್ದರೆ, ಈ ಸಂವಾದವು ವಾಸ್ತವಾಧಾರಿತ ಒಳನೋಟಗಳನ್ನು ಒದಗಿಸುತ್ತದೆ.

ಸಂಪೂರ್ಣ ಸಂಚಿಕೆಯನ್ನು ನೋಡಿ ಮತ್ತು ಸಂವಾದದಲ್ಲಿ ಪಾಲ್ಗೊಳ್ಳಿ.

ಭಾಷೆ ಮತ್ತು ದೊರೆಯುವಿಕೆ:

ಈ ಸಂಚಿಕೆಯ ಸಂಭಾಷಣೆ ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಮಿಶ್ರಣವಾಗಿದೆ. ಎರಡೂ ಭಾಷೆಗಳಲ್ಲಿ ಅಡಿಬರಹಗಳು ಲಭ್ಯವಿದೆ. – CCಯನ್ನು ಆನ್ ಮಾಡಿ, ನಿಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಿ.

Episode Guests | ಸಂಚಿಕೆ ಅತಿಥಿಗಳು

Aruna Kumari

Aruna Kumari is a Senior Field Officer at Cividep India, working on labour rights, occupational safety, and women workers’ issues in Karnataka. She has supported and organised women garment workers through advocacy, counselling, and documentation to advance equity and empowerment in the workplace. labour rights, occupational safety, and women workers’ issues.

She builds and maintains networks with government officials, local authorities, and institutional stakeholders to facilitate program implementation and

Advocacy. She supports the development of reports and research documentation, translating field insights into actionable recommendations for advocacy and program improvement. She also collaborates with internal teams to organise worker forums to raise awareness amongst workers on labour and gender-related issues.

Aruna aims to support initiatives that improve working conditions, promote gender equality, ensure occupational safety and health and enhance the socio-economic status of women in the garment sector, while fostering sustainable community and organisational development.

ಅರುಣಾ ಕುಮಾರಿ

ಅರುಣಾ ಕುಮಾರಿ ಅವರು ಸಿವಿಡೆಪ್ ಇಂಡಿಯಾ ಸಂಸ್ಥೆಯ ಹಿರಿಯ ಕ್ಷೇತ್ರಾಧಿಕಾರಯಾಗಿದ್ದು, ಕಾರ್ಮಿಕ ಹಕ್ಕುಗಳು, ಉದ್ಯೋಗಸ್ಥಳದ ಸುರಕ್ಷತೆ ಮತ್ತು ಮಹಿಳಾ ಕಾರ್ಮಿಕರ ಸಮಸ್ಯೆಗಳು ಕುರಿತಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಂಘಟನೆ, ಆಪ್ತಸಮಾಲೋಚನೆ, ಮತ್ತು ದಾಖಲೀಕರಣದ ಮೂಲಕ ಮಹಿಳಾ ಬಟ್ಟೆ ಕಾರ್ಮಿಕರ ಹಕ್ಕುಗಳ ಪರ ವಕಾಲತ್ತು ಮಾಡುವ ಮೂಲಕ ಉದ್ಯೋಗಸ್ಥಳದಲ್ಲಿ ಸಮಾನತೆ ಮತ್ತು ಸಬಲಿಕರಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಅವರು ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಪಾಲುದಾರ ಸಂಸ್ಥೆಗಳೊಂದಿಗೆ ಬಲವಾದ ಸಂಪರ್ಕ ಜಾಲಗಳನ್ನು ನಿರ್ಮಿಸಿ, ಕಾರ್ಯಕ್ರಮಗಳ ಅನುಷ್ಠಾನ ಮತ್ತು ವಕಾಲತ್ತಿಗೆ ಸಹಾಯ ಮಾಡುತ್ತಾರೆ.

ವರದಿ ಮತ್ತು ಸಂಶೋಧನಾ ದಾಖಲೆಗಳನ್ನು ಸಿದ್ಧಪಡಿಸುವುದು, ಕ್ಷೇತ್ರದ ಅನುಭವಗಳಿಂದ ಪಡೆದ ಅಂತರದೃಷ್ಟಿಗಳನ್ನು ಪ್ರಾಯೋಗಿಕ ಶಿಫಾರಸುಗಳಾಗಿ ಪರಿವರ್ತಿಸುವ ಮೂಲಕ ವಕಾಲತ್ತು ಮತ್ತು ಕಾರ್ಯಕ್ರಮ ಸುಧಾರಣೆಗೆ ಮಾರ್ಗದರ್ಶನ ನೀಡುತ್ತಾರೆ. ಸಂಸ್ಥೆಯ ಆಂತರಿಕ ತಂಡಗಳ ಸಹಯೋಗದೊಂದಿಗೆ, ಕಾರ್ಮಿಕ ವೇದಿಕೆಗಳನ್ನು ಆಯೋಜಿಸಿ ಕಾರ್ಮಿಕರಿಗೆ ತಮ್ಮ ಹಕ್ಕುಗಳು, ಲಿಂಗ ಸಮಾನತೆ ಮತ್ತು ಉದ್ಯೋಗಸ್ಥಳದಲ್ಲಿನ ಸುರಕ್ಷತೆ ಕುರಿತ ಅರಿವು ಮೂಡಿಸುತ್ತಾರೆ.

ಉಡುಪು ತಯಾರಿಕಾ ಕೈಗಾರಿಕೆಯ ಮಹಿಳಾ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವುದು, ಕಾರ್ಯಸ್ಥಳದ ಸುರಕ್ಷತೆ ಮತ್ತು ಆರೋಗ್ಯವನ್ನು ನೋಡಿಕೊಳ್ಳುವುದು, ಲಿಂಗ ಸಮಾನತೆ ಬೆಳೆಸುವುದು ಹಾಗೂ ಸುಸ್ಥಿರ ಸಮುದಾಯ ಮತ್ತು ಸಂಸ್ಥಾ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ.

Dr Gayathri Vasudevan

Dr. Gayathri Vasudevan is the Chief Impact Officer at Sambhav Foundation. She built Sambhav Foundation in 2006 with a vision to enable livelihoods and to enhance the quality of life of vulnerable communities through Education, Employability and Entrepreneurship. Her mission was to touch millions of lives, empower youth, men and women to earn a decent living and become micro entrepreneurs.

She has been extensively involved in policy issues and community mobilizations relating to labour and livelihoods, leading to recognition and accolades across the globe. 

Gayathri was cited as one of the top 50 women in business by Business Today, a leading magazine in India in the year 2017 and “Entrepreneur of the Year in Social Business Category” by Forbes India in 2018. She is also a recipient of NITI Aayog’s Women Transforming India Award for 2021. She has been a TED speaker several times. Between 1999 and 2007, Gayathri worked for the International Labour Organization (ILO), a United Nations agency. 

She has a Doctorate in Development Studies, with 30 publications in the areas of labour, employment and gender issues to her credit.

ಡಾ. ಗಾಯತ್ರಿ ವಾಸುದೇವನ್

ಗಾಯತ್ರಿ ವಾಸುದೇವನ್ ಸಂಭವ್ ಫೌಂಡೇಶನ್ ನ ಮುಖ್ಯ ಪರಿಣಾಮ ಅಧಿಕಾರಿ. ಇವರು ಶಿಕ್ಷಣ, ಜೀವನೋಪಾಯ ಮತ್ತು ಉದ್ಯಮಶೀಲತೆ ಮುಖಾಂತರ ಅಸುರಕ್ಷಿತ ಸಮುದಾಯಗಳ ಜೀವನಮಟ್ಟವನ್ನು ಸುಧಾರಿಸುವ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ. ಜೀವನಗಳ ಸ್ಪರ್ಶ, ಯುವಶಕ್ತಿಯ ಸಬಲತೆ ಮತ್ತು ಸ್ತ್ರೀಪುರುಷರು ಗೌರವಯುತವಾದ ಉದ್ಯೋಗ ಹೊಂದಿ ಸಣ್ಣ ಉದ್ದಿಮೆದಾರಾಗಬೇಕು ಎನ್ನುವುದು ಇವರ ಉದ್ದೇಶ. 

ಕಾರ್ಮಿಕರು ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ನೀತಿನಿರ್ಣಯ ಹಾಗೂ ಸಮುದಾಯ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಾದರಗಳು ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಗಾಯತ್ರಿಯವರು ವಿಶ್ವದ 50 ಮಹಾನ್ ಉದ್ದಿಮೆದಾರರು ಎಂದು ಪ್ರತಿಷ್ಠಿತ ಪತ್ರಿಕೆ ಬ್ಯುಸಿನೆಸ್ ಟುಡೇ 2017ರಲ್ಲಿ ಗುರುತಿಸಿದೆ. “ಸಾಮಾಜಿಕ ಉದ್ದಿಮೆಗಳ ವರ್ಗದಲ್ಲಿ, ವರ್ಷದ ಉದ್ಯಮಿ” ಎಂದು 2018ರಲ್ಲಿ ಫೋರ್ಬ್ಸ್ ಇಂಡಿಯಾ ಇವರನ್ನು ಸನ್ಮಾನಿಸಿದೆ. ನೀತಿ ಆಯೋಗದ ಮಹಿಳಾ ಪರಿವರ್ತನಕಾರರು ಪ್ರಶಸ್ತಿಯನ್ನು ಇವರು 2021ರಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. 1999 ರಿಂದ 2007ರವರೆಗೆ ಗಾಯತ್ರಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿದ್ದಾರೆ. 

ಅಭಿವೃದ್ಧಿ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಇವರು ಕಾರ್ಮಿಕ, ಉದ್ಯೋಗ ಮತ್ತು ಲಿಂಗ ಸಮಾನತೆ  ಕುರಿತ 30 ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು  ಪ್ರಕಟಿಸಿದ್ದಾರೆ.. 

Stay connected with BSF:

ಬಿಎಸ್‌ಎಫ್‌ನೊಂದಿಗೆ ಸಂಪರ್ಕದಲ್ಲಿರಿ: