Health x Climate Change

Health & Climate Change in Bengaluru | Climate Charche Podcast

In this episode of the Climate Charche podcast, we explore health and climate change in Bengaluru — and why this is no longer just an environmental issue, but a public health priority.

Sukanya R. (Program Manager, Swasti Health Catalyst) and Prashanth NS, (Director, Institute of Public Health), examine how climate change is now woven into everyday urban life.

As people migrate to cities seeking work and opportunity, urban systems often fail to protect them — especially vulnerable workers exposed to occupational risks, heat stress, flooding, and inadequate sanitation. At the heart of the episode are urgent questions: Is it enough to ask individuals to change their behaviour to safeguard their health without providing the infrastructure that makes healthy choices possible? And ultimately, who is accountable for protecting urban health — both physical and mental — in a rapidly expanding city?

Key themes include:

  • The current state of public health systems in Bengaluru
  • The impact of a changing climate on health outcomes
  • Occupational health risks across organised and informal sectors
  • Urban inequality and barriers to healthcare access
  • The need for climate-informed, accountable health governance

For those concerned about climate change in Bangalore, public health systems, or urban resilience in Indian cities, this conversation offers grounded, timely insights.

Watch the full episode on the Climate Charche Podcast and join the dialogue on building a healthier, climate-resilient Bengaluru.

Language & Accessibility: This episode is a mix of English and Kannada. Subtitles are available in both languages – turn on CC and select your preferred option.

ಬೆಂಗಳೂರಿನಲ್ಲಿನ ಆರೋಗ್ಯ ಮತ್ತು ಹವಾಮಾನ ಬದಲಾವಣೆ | ಕ್ಲೈಮೇಟ್ ಚರ್ಚೆ ಪಾಡ್‌ಕ್ಯಾಸ್ಟ್

ಕ್ಲೈಮೇಟ್ ಚರ್ಚೆ ಪಾಡ್‌ಕ್ಯಾಸ್ಟ್‌ನ ಈ ಸಂಚಿಕೆಯಲ್ಲಿ ನಾವು, ಬೆಂಗಳೂರಿನಲ್ಲಿ ಆರೋಗ್ಯ ಹಾಗೂ ಹವಾಮಾನ ಬದಲಾವಣೆ – ಮತ್ತು ಅದು ಕೇವಲ ಹವಾಮಾನ ಸಂಬಂಧೀ ಪ್ರಶ್ನೆಯಾಗಿರದೇ ಏಕೆ ಸಾರ್ವಜನಿಕ ಆರೋಗ್ಯ ಸಂಗತಿಯಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ.

ಸುಕನ್ಯಾ ಆರ್ (ಪ್ರೋಗ್ರಾಮ್ ಮ್ಯಾನೆಜರ್, ಸ್ವಸ್ತಿ ಹೆಲ್ತ್ ಕ್ಯಾಟೆಲಿಸ್ಟ್) ಮತ್ತು ಪ್ರಶಾಂತ್ ಎನ್‌ಎಸ್, (ನಿರ್ದೇಶಕರು, ಸಾರ್ವಜನಿಕ ಆರೋಗ್ಯ ಸಂಸ್ಥೆ), ಅವರುಗಳು ಹವಾಮಾನ ಬದಲಾವಣೆಯು ಹೇಗೆ ನಗರಗಳ ದೈನಂದಿನ ಜೀವನದೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ವಿಶ್ಲೇಷಿಸಲಿದ್ದಾರೆ.

ಜನರು ಉದ್ಯೋಗ ಮತ್ತು ಅವಕಾಶಗಳನ್ನು ಅರಸುತ್ತಾ ನಗರಗಳಿಗೆ ವಲಸೆ ಹೋಗುವಾಗ, ವಿಶೇಷವಾಗಿ ವೃತ್ತಿಜನಿತ ಅಪಾಯಗಳು, ತಾಪ ಒತ್ತಡ, ನೆರೆಮಳೆಯಿಂದ ಉಂಟಾಗುವ ನೀರು ನುಗ್ಗುವಿಕೆ ಹಾಗೂ ಅಸಮರ್ಪಕ ನೈರ್ಮಲ್ಯದಂತಹ ಸಮಸ್ಯೆಗಳಿಗೆ ಒಳಗಾಗುವ ಅತೀ ದುರ್ಬಲ ಕಾರ್ಮಿಕರನ್ನು ನಗರ ವ್ಯವಸ್ಥೆಗಳು ಸಮರ್ಪಕವಾಗಿ ರಕ್ಷಿಸಲು ವಿಫಲವಾಗುತ್ತಿವೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಂಚಿಕೆಯ ಜೀವಾಳದಲ್ಲಿ ಈ ತುರ್ತು ಪ್ರಶ್ನೆಗಳಿವೆ: ಆರೋಗ್ಯಕರ ಆಯ್ಕೆಗಳನ್ನು ಸಾಧ್ಯವಾಗಿಸುವ ಮೂಲಭೂತ ಸೌಕರ್ಯಗಳನ್ನು ಒದಗಿಸದೆ, ಜನರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೇಳುವುದಷ್ಟೇ ಸಾಕೇ? ಮತ್ತು ಅಂತಿಮವಾಗಿ, ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡನ್ನೂ ಸಂರಕ್ಷಿಸುವ ಜವಾಬ್ದಾರಿ ಯಾರದ್ದು?

ಈ ಚರ್ಚೆಯಲ್ಲಿನ ಪ್ರಮುಖವಾದ ವಿಷಯಗಳು:

  • ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಪ್ರಸ್ತುತ ಸ್ಥಿತಿ.
  • ಹವಾಮಾನ ಬದಲಾವಣೆಯು ಆರೋಗ್ಯ ಫಲಿತಾಂಶಗಳ ಮೇಲೆ ಬೀರುವ ಪರಿಣಾಮ.
  • ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿರುವ ವೃತ್ತಿಜನಿತ ಆರೋಗ್ಯ ಅಪಾಯಗಳು.
  • ಆರೋಗ್ಯ ಸೇವೆಗಳ ಲಭ್ಯತೆಗೆ ಸಂಬಂಧಿಸಿದ ನಗರ ಅಸಮಾನತೆ ಹಾಗೂ ಅಡೆತಡೆಗಳು.
  • ಹವಾಮಾನ ಜಾಗೃತ ಹಾಗೂ ಜವಾಬ್ದಾರಿಯುತ ಆರೋಗ್ಯ ಆಡಳಿತದ ಅಗತ್ಯ.

ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಅಥವಾ ಭಾರತೀಯ ನಗರಗಳಲ್ಲಿ ನಗರ ಪುನರುತ್ಥಾನ ಸಾಮರ್ಥ್ಯಗಳ ಕುರಿತು ಕಾಳಜಿಯಿರುವವರಿಗೆ ಈ ಸಂವಾದವು ವಾಸ್ತವಾಧಾರಿತ ಸಮಯೋಚಿತ ಒಳನೋಟಗಳನ್ನು ಒದಗಿಸುತ್ತದೆ.

ಕ್ಲೈಮೇಟ್ ಚರ್ಚೆ ಪೋಡ್‌ಕ್ಯಾಸ್ಟ್‌ನ ಪೂರ್ಣ ಸಂಚಿಕೆಯನ್ನು ನೋಡಿ ಮತ್ತು ಹವಾಮಾನ ತಾಳಿಕೆ ಸಾಮರ್ಥ್ಯದ, ಆರೋಗ್ಯಕರ ಬೆಂಗಳೂರನ್ನು ನಿರ್ಮಿಸುವ ಕುರಿತಾದ ಸಂವಾದದಲ್ಲಿ ಪಾಲ್ಗೊಳ್ಳಿರಿ.

ಭಾಷೆ ಮತ್ತು ದೊರೆಯುವಿಕೆ:

ಈ ಸಂಚಿಕೆಯ ಸಂಭಾಷಣೆ ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಮಿಶ್ರಣವಾಗಿದೆ. ಎರಡೂ ಭಾಷೆಗಳಲ್ಲಿ ಅಡಿಬರಹಗಳು ಲಭ್ಯವಿದೆ. – CCಯನ್ನು ಆನ್ ಮಾಡಿ, ನಿಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಿ.

Episode Guests | ಸಂಚಿಕೆ ಅತಿಥಿಗಳು

Sukanya R.

Sukanya is Program Manager at Swasti Health Catalysts. Her focus spans public health, climate health, gender equity, workforce well-being, leadership, life skills training, financial management, PoSH and social protection, ensuring holistic and sustainable impact in both workplaces and communities. With 15 years of experience in the social development sector, Sukanya brings strong expertise in project management, implementation, capacity building, and community development. Based out of Bangalore, she has been deeply engaged in working with communities in the city, particularly with marginalized and vulnerable groups.

In her current role, Sukanya not only continues her work in Bangalore but also supports diverse teams and projects across states, including initiatives on workers’ well-being and primary health care in Nagaland, Meghalaya, and Tamil Nadu. With Swasti’s organizational focus on climate and health, she is now integrating a climate lens into her health programming and leading efforts to build climate-resilient communities.

Sukanya’s vision centers on improving health, quality of life, and equal opportunities for everyone. This also involves fostering resilient and sustainable systems, ultimately contributing to Swasti’s larger goal of adding 100 million health days to the lives of the most vulnerable.

ಸುಕನ್ಯಾ ಆರ್

ಸುಕನ್ಯಾ ಅವರು ಸ್ವಸ್ತಿ ಹೆಲ್ತ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ಆಗಿದ್ದಾರೆ. ಅವರು ಸಾರ್ವಜನಿಕ ಆರೋಗ್ಯ, ಹವಾಮಾನ ಆರೋಗ್ಯ, ಲಿಂಗ ಸಮಾನತೆ, ಉದ್ಯೋಗಸ್ಥಳದ ಒಳಿತು, ನಾಯಕತ್ವ, ಜೀವನ ಕೌಶಲ್ಯ ತರಬೇತಿ, ಹಣಕಾಸು ನಿರ್ವಹಣೆ, ಲೈಂಗಿಕ ದೌರ್ಜನ್ಯ ತಡೆಯುವಿಕೆ ಮತ್ತು ಸಾಮಾಜಿಕ ಭದ್ರತೆ ಇತ್ಯಾದಿ ಕ್ಷೇತ್ರಗಳಲ್ಲಿ ಅವರ ಆಸಕ್ತಿಗಳು ಹರಡಿಕೊಂಡಿದ್ದು, ಉದ್ಯೋಗಸ್ಥಳದಲ್ಲಿ ಹಾಗೂ ಸಮುದಾಯಗಳಲ್ಲಿ ಸಮಗ್ರ ಹಾಗೂ ಸುಸ್ಥಿರ ಪರಿಣಾಮವನ್ನು ಬೀರುವ ಉದ್ದೇಶ ಹೊಂದಿದೆ. ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿರುವ ಇವರು , ಯೋಜನಾ ನಿರ್ವಹಣೆ, ಜಾರಿ, ಸಾಮರ್ಥ್ಯ ನಿರ್ಮಾಣ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಬೆಂಗಳೂರಿನವರಾದ ಈಕೆ, ನಗರದಲ್ಲಿನ ಸಮುದಾಯಗಳೊಂದಿಗೆ, ಅದರಲ್ಲೂ ಕಡೆಗಣಿತವಾದ ಮತ್ತು ಅಪಾಯಕ್ಕೀಡಾಗಬಹುದಾದ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುತ್ತಾರೆ.  

ತಮ್ಮ ಪ್ರಸ್ತುತ ಉದ್ಯೋಗದಲ್ಲಿ ಆಕೆ ಬೆಂಗಳೂರಿನ ಯೋಜನೆಗಳನ್ನಷ್ಟೇ ಅಲ್ಲದೇ, ನಾಗಾಲ್ಯಾಂಡ್, ಮೇಘಾಲಯ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಕಾರ್ಮಿಕರ ಆರೋಗ್ಯ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ. ಸ್ವಸ್ತಿ ಸಂಸ್ಥೆ ಹವಾಮಾನ ಮತ್ತು ಆರೋಗ್ಯಕ್ಕೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ, ಸುಕನ್ಯಾ ಹವಾಮಾನ ಸಹನಶೀಲತೆಯ ದೃಷ್ಟಿಕೋನವನ್ನು ತಮ್ಮ ಆರೋಗ್ಯ ಕಾರ್ಯಕ್ರಮಗಳಲ್ಲಿ ಅಳವಡಿಸುತ್ತಿದ್ದು, ಹವಾಮಾನ ಸಹಿಷ್ಣು ಸಮುದಾಯಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ಮುನ್ನಡೆಸುತ್ತಿದ್ದಾರೆ.

ಎಲ್ಲರಿಗೂ ಉತ್ತಮ ಆರೋಗ್ಯ, ಜೀವನಮಟ್ಟದ ಸುಧಾರಣೆ ಹಾಗೂ ಸಮಾನ ಅವಕಾಶಗಳನ್ನು ಒದಗಿಸುವುದರತ್ತ ಅವರು ಗಮನಹರಿಸುತ್ತಿದ್ದಾರೆ. ಇದರಿಂದ ಸುಸ್ಥಿರ ಮತ್ತು ಸಹನಶೀಲ ವ್ಯವಸ್ಥೆಗಳ ನಿರ್ಮಾಣ ಸಾಧ್ಯವಾಗುತ್ತದೆಯಲ್ಲದೇ, ಸ್ವಸ್ತಿ ಸಂಸ್ಥೆಯ ಅತ್ಯಂತ ಅಸುರಕ್ಷಿತ ಜನರ ಜೀವನದಲ್ಲಿ 100 ಮಿಲಿಯನ್ ಆರೋಗ್ಯದ ದಿನಗಳನ್ನು ಸೇರಿಸುವ ಮಹತ್ವಾಕಾಂಕ್ಷೆಯ ಗುರಿಗೆ ಸಹಾಯ ಮಾಡುತ್ತದೆ.

Prashanth NS

Prashanth is Director & Health equity cluster lead at the Institute of Public Health (IPH) Bengaluru. He is a medical doctor and public health researcher with experience in working in primary health care and community settings in southern Karnataka (India). He works at the intersections of healthcare and health systems with ecological and social systems with a particular focus on health inequities and social determinants of health. He leads a research group that focuses on transformative action on health inequities at the IPH. His work critically examines the apparently transformative dimensions of technological solutions to health inequities vis-a-vis addressing fundamental issues of social inequality, exclusion and governance. He has been a champion of open knowledge and contributes actively to English Wikipedia, Wikimedia Commons, Internet Archive and various other open knowledge and open data projects. Since 2014, he has been living and working at a long-term public health learning site at BR Hills Tiger Reserve in southern India. He has served as the Chair of Emerging Voices for Global Health (2015-2019) and serves as the Vice-Chair of the General Council of the Institute of Tropical Medicine, Antwerp (Belgium). His research has been published in international peer-reviewed journals. He is a marathon runner and a birder with active contributions to eBird. He is also a licensed ham radio operator.

ಡಾ. ಪ್ರಶಾಂತ್ ಎನ್.ಎಸ್.

ಪ್ರಶಾಂತ್ ಅವರು ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಇಲ್ಲಿಯ ನಿರ್ದೇಶಕರು ಹಾಗೂ ಹೆಲ್ತ್ ಇಕ್ವಿಟಿ ಕ್ಲಸ್ಟರ್ ಲೀಡ್ ಆಗಿದ್ದಾರೆ. ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧಕರಾದ ಇವರು, ದಕ್ಷಿಣ ಕರ್ನಾಟಕದ ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರ ಸಂಶೋಧನೆ ಆರೋಗ್ಯ ವ್ಯವಸ್ಥೆಗಳು, ಪರಿಸರ ವ್ಯವಸ್ಥೆಗಳು ಮತ್ತು ಸಾಮಾಜಿಕ ವ್ಯವಸ್ಥೆಗಳ ನಡುವೆ ಇದೆ. ವಿಶೇಷವಾಗಿ ಅವರು ಆರೋಗ್ಯ ಅಸಮಾನತೆಗಳು ಮತ್ತು ಆರೋಗ್ಯದ ಸಾಮಾಜಿಕ ನಿರ್ಧಾರಕ ಅಂಶಗಳು ಕುರಿತು ಆಳವಾದ ಅಧ್ಯಯನ ಮಾಡುತ್ತಾರೆ. ಐಪಿಎಚ್ ನಲ್ಲಿ ಅವರು ಆರೋಗ್ಯ ಅಸಮಾನತೆಗಳ ಮೇಲೆ ಪರಿವರ್ತನಾತ್ಮಕ ಕ್ರಮಗಳ ಕುರಿತು ಕಾರ್ಯನಿರತವಾಗಿರುವ ಸಂಶೋಧನಾ ತಂಡದ ಮುಖ್ಯಸ್ಥರಾಗಿದ್ದಾರೆ. ಅವರ ಸಂಶೋಧನೆಗಳು ತಂತ್ರಜ್ಞಾನ ಆಧಾರಿತ ಆರೋಗ್ಯ ಪರಿಹಾರಗಳು ನಿಜವಾಗಿಯೂ ಪರಿವರ್ತನಾತ್ಮಕವಾಗಿವೆಯೇ, ಸಾಮಾಜಿಕ ಅಸಮಾನತೆ, ಹೊರಗುಳಿಯುವಿಕೆ ಮತ್ತು ಆಡಳಿತ ಇತ್ಯಾದಿ ಮೂಲಭೂತ ಸಮಸ್ಯೆಗಳನ್ನು ಸ್ಪರ್ಶಿಸುತ್ತದೆಯೇ ಎಂದು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ — ಮತ್ತು ಅವರು ಮುಕ್ತ ಜ್ಞಾನ ಚಳವಳಿಯ ಬಲವಾದ ಬೆಂಬಲಕರಾಗಿದ್ದು, ಇಂಗ್ಲಿಷ್ ವಿಕಿಪೀಡಿಯಾ, ವಿಕಿಮೀಡಿಯಾ ಕಾಮನ್ಸ್, ಇಂಟರ್‌ನೆಟ್ ಆರ್ಕೈವ್ ಹಾಗೂ ವಿವಿಧ ಮುಕ್ತ ಜ್ಞಾನ ಮತ್ತು ಮುಕ್ತ ಡೇಟಾ ಯೋಜನೆಗಳಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಾರೆ. 2014 ರಿಂದ, ಅವರು ದಕ್ಷಿಣ ಭಾರತದ ಬಿ.ಆರ್. ಹಿಲ್ಸ್ ಟೈಗರ್ ರಿಸರ್ವ್ ಪ್ರದೇಶದಲ್ಲಿರುವ ದೀರ್ಘಾವಧಿಯ ಸಾರ್ವಜನಿಕ ಆರೋಗ್ಯ ಕಲಿಕಾ ಕೇಂದ್ರದ ನಿವಾಸಿ ಉದ್ಯೋಗಿಯಾಗಿದ್ದಾರೆ. ಅವರು ಎಮರ್ಜಿಂಗ್ ವಾಯ್ಸಸ್ ಫಾರ್ ಗ್ಲೋಬಲ್ ಹೆಲ್ತ್ ಸಂಸ್ಥೆಯ ಅಧ್ಯಕ್ಷರಾಗಿದ್ದು (2015–2019), ಪ್ರಸ್ತುತ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್, ಆಂಟ್ವರ್ಪ್ ನ ಜನರಲ್ ಕೌನ್ಸಿಲ್ ಉಪಾಧ್ಯಕ್ಷರಾಗಿದ್ದಾರೆ. ಅವರ ಸಂಶೋಧನೆಗಳು ಅಂತಾರಾಷ್ಟ್ರೀಯ ಪಿಯರ್-ರಿವ್ಯೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೈಯಕ್ತಿಕ ಜೀವನದಲ್ಲಿ, ಅವರು ಮ್ಯಾರಥಾನ್ ಓಟಗಾರ ಮತ್ತು ಪಕ್ಷಿ ವೀಕ್ಷಕರಾಗಿದ್ದು, eBirdನಲ್ಲಿ ಸಕ್ರಿಯ ಕೊಡುಗೆ ನೀಡುತ್ತಾರೆ. ಅಲ್ಲದೆ ಅವರು ಪರವಾನಗಿ ಪಡೆದಿರುವ ಹ್ಯಾಮ್ ರೇಡಿಯೋ ಆಪರೇಟರ್ ಆಗಿದ್ದಾರೆ.

Take the conversation further:

Website

Additional Notes from PrashanthReflecting on the podcast, one key point I wish I could have emphasized further is the urgent need for investment in an urban primary health care system for a city like Bangalore. After watching the trailer and hearing Vishwanath describe the city’s challenges, I was struck by the inadequacy of our current health care system to deal with the multiple challenges he outlines.

An ideal primary health care system should:• Be the first point of contact for most residents• Enable early detection of illnesses• Help prevent ill health (through vaccination, guidance on heat stress, dehydration, infant and child care, screening for non-communicable diseases, etc.)• Promote overall wellness– Building resilience to ongoing/upcoming health challenges in large cities – road safety, dengue outbreaks, heat stress– Building cities that “promote” health – better mobility, greens and public spaces….

Right now, the health system is a complex matrix of specialty and super specialty hospitals, plus a fragmented network of private hospitals and clinics. Residents are left to navigate this maze on their own. Those with social and economic privilege or deep roots in the city manage better, but new residents, the poor, and vulnerable groups are often left behind—seeking care only when conditions become critical.

There’s also tremendous untapped potential for engaging communities in public health, waste management, health promotion, and related areas.

In summary, for Bangalore, investing in a robust, government-supported primary health care system is crucial and deserves urgent attention, alongside the other issues raised in the podcast.

Article on People centred PHC https://www.theindiaforum.in/health/community-health-officers-key-unlocking-people-centred-primary-healthcare

Additional reading from APU: https://azimpremjiuniversity.edu.in/publications/report/health-care-equity-in-urban-india

Stay connected with BSF:

ಬಿಎಸ್‌ಎಫ್‌ನೊಂದಿಗೆ ಸಂಪರ್ಕದಲ್ಲಿರಿ: