Call for Applications | 2025 -2026
Bengaluru Sustainability Forum’s Small Grant Programme
BSF Small Grants Programme || 2025 – 2026
ಬಿಎಸ್‌ಎಫ್‌ನ ಕಿರು ಅನುದಾನ ಯೋಜನೆ 2025 – 2026 ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ
Climate change is reshaping our world, with rising temperatures, extreme weather events, and shifting ecosystem patterns posing unprecedented challenges. Urban and rural communities alike must develop adaptive and resilient strategies to mitigate these impacts and safeguard their future. At the same time, it is increasingly evident that many of the current challenges have their roots in skewed local level planning and development priorities, requiring systemic changes.
How can we then enhance resilience at the local level?
What innovative, inclusive, and sustainable solutions can help communities adapt to such challenges?
- The Bengaluru Sustainability Forum under its Small Grants Programme invites grant proposals focusing on building resilience in the urban context.
- We encourage projects that address key themes such as water security, ecosystem restoration, disaster preparedness, community-led adaptation strategies, climate-resilient infrastructure and more.
- We look for proposals that link these themes to broader issues like social equity, economic development, and people-centred technological innovation.
- Cross-institutional collaborations with an interdisciplinary approach and involvement of on-ground stakeholders are encouraged.
The BSF Small Grants Programme is designed to bring together people and ideas across areas of expertise and call for collaborations across different professional backgrounds.
We look forward to receiving innovative and impactful proposals that can make a difference in building climate-resilient communities!
- Proposals must address aspects of urban adaptation and resilience, either directly or in conjunction with other sustainable development goals.
- Projects should focus on Bangalore or its peri urban areas.
- The proposed project should involve at least two collaborators, with at least one of them being a registered organisation.
- Projects should have a strong community engagement component, emphasising participatory and locally driven solutions.
- Preference will be given to projects that are practical, scalable, and replicable in different contexts.
- Funding period: Up to 12 months.
- Grant amount: Up to 5 Lakh INR (subject to project scope and type – pilot implementation, research, communication, or documentation).
- Submit your application here.
- Submit completed proposals by 5th May 2025.
- Shortlisted proposals will be notified by 15th June 2025.
- Shortlisted applicants will be invited to present their proposals before final selection.
- Projects are expected to commence by September-October 2025.
For any questions or further clarifications, please contact bsf@ncbs.res.in
You can get in touch prior to sending in an application if you or your organisation has a strong cross-disciplinary idea to address the above, but you have not yet found a partner with the desired expertise.
To get answers to some frequently asked questions on the Small Grants Programme and for more information, visit: http://www.bengalurusustainabilityforum.org/small-grants/
About Bengaluru Sustainability Forum
The Bengaluru Sustainability Forum is a multi-institutional initiative focusing on issues of urban and peri-urban sustainability in Bengaluru. With an aim to foster a holistic understanding of sustainability issues and innovative solutions in the city, BSF curates interdisciplinary conversations and collaborations with various stakeholders – from academics, researchers and practitioners to social advocates and citizens. The small grants program is aimed at providing seed funding for some of the projects, perspectives and approaches that align with the BSF mandate.
About the BSF Small Grants Programme
The small grants programme is an effort to enable and support local, innovative, cross-disciplinary, collaborative projects in Bengaluru to start off and grow into a sustainable future. The projects primarily address issues related to one or more of the following thematics: Urban Biodiversity, Urban Water, Urban Climate Change, Urban Waste. The work supported by the Small Grants Programme spans a wide spectrum of interesting ideas and innovative formats; achieving an impressive breadth and depth of interventions for our city.
Past projects have adopted methodologies that included: Qualitative & Quantitative | Data Collection | Action Research | Design-Based Research Community Outreach | Participatory Methods | Capacity building Workshops | Citizen Science
Some of the main outputs of previous projects have taken the form of: Books | Field Guides | Posters | Games | Poetry | Murals | Illustrations | Articles | Research Publications | Apps | Reports | Blogs | Websites
For more information and to get answers to some frequently asked questions, please visit the BSF Small Grants Programme webpage.
ಬಿಎಸ್‌ಎಫ್‌ನ ಕಿರು ಅನುದಾನ ಯೋಜನೆ 2025ರ ಪ್ರಸ್ತಾವನೆಗಳಿಗೆ ಆಹ್ವಾನ
ಹೆಚ್ಚುತ್ತಿರುವ ತಾಪಮಾನ, ತೀವ್ರ ಹವಾಮಾನ ವೈಪರೀತ್ಯಗಳು ಮತ್ತು ಪರಿಸರ ವ್ಯವಸ್ಥೆಗಳ ಬದಲಾವಣೆಯಂತಹ ಅಭೂತಪೂರ್ವ ಸವಾಲುಗಳನ್ನು ಒಡ್ಡುತ್ತಿರುವ ಹವಾಮಾನ ಬದಲಾವಣೆಯು ನಮ್ಮ ಜಗತ್ತನ್ನು ಮರು-ರೂಪಿಸುತ್ತಿದೆ. ಇದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ತಮ್ಮ ಭವಿಷ್ಯವನ್ನು ಕಾಪಾಡಿಕೊಳ್ಳಲು, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಮುದಾಯಗಳೆರಡೂ ಹೊಂದಾಣಿಕೆಯ ಮತ್ತು ಸ್ಥಿತಿಸ್ಥಾಪಕತ್ವದ ತಂತ್ರಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕಿದೆ. ಇದೇ ಹೊತ್ತಿನಲ್ಲಿ, ಇಂದಿನ ಸವಾಲುಗಳಲ್ಲಿ ಅನೇಕವುಗಳ ಮೂಲವು ಏರುಪೇರಾದ ಸ್ಥಳೀಯ ಕಾರ್ಯಯೋಜನೆಗಳು ಮತ್ತು ಅಭಿವೃದ್ಧಿಯ ಆದ್ಯತೆಗಳಲ್ಲಿ ಅಡಗಿರುವುದು ಸ್ಪಷ್ಟವಾಗಿ ತೋರುತ್ತಿದ್ದು, ಇವುಗಳನ್ನು ಸರಿಪಡಿಸಲು ವ್ಯವಸ್ಥೆಯ ಮಾರ್ಪಾಟುಗಳ ಅಗತ್ಯವಿದೆ.
- ಸ್ಥಳೀಯ ಮಟ್ಟದಲ್ಲಿ ನಾವು ಸ್ಥಿತಿಸ್ಥಾಪಕತ್ವವನ್ನು ಹೇಗೆ ಹೆಚ್ಚಿಸಬಲ್ಲೆವು?
- ಸಮುದಾಯಗಳು ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಯಾವ ರೀತಿಯ ಉಪಕ್ರಮಗಳು, ಒಳಗೊಳ್ಳುವಿಕೆಗಳು ಮತ್ತು ಸುಸ್ಥಿರ ಪರಿಹಾರಗಳು ನೆರವಾಗಬಲ್ಲವು?
ಬೆಂಗಳೂರು ಸಸ್ಟೇನೆಬಿಲಿಟಿ ಫೋರಮ್ ತನ್ನ ಕಿರು ಅನುದಾನ ಯೋಜನೆಯ ಅಡಿಯಲ್ಲಿ, ನಗರ ಪ್ರದೇಶಕ್ಕೆ ಸಂಬಂಧಿಸಿದಂಥಾ ಸ್ಥಿತಿಸ್ಥಾಪಕತ್ವ ಕೇಂದ್ರಿತವಾದ ಅನುದಾನ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ.
- ನಾವು ಜಲಭದ್ರತೆ, ಪರಿಸರ ವ್ಯವಸ್ಥೆಯ ಮರುಸ್ಥಾಪನೆ, ವಿಪತ್ತು ಸಿದ್ಧತೆ, ಸಮುದಾಯ ಚಾಲಿತ ಹೊಂದಾಣಿಕೆಯ ತಂತ್ರಗಳು, ಹವಾಮಾನ – ಸ್ಥಿತಿಸ್ಥಾಪಕತ್ವ ಮೂಲಭೂತ ಸೌಕರ್ಯಗಳೇ ಮೊದಲಾದವುಗಳನ್ನು ಪ್ರಮುಖ ವಿಷಯವಾಗಿ ಹೊಂದಿರುವ ಯೋಜನೆಗಳನ್ನು ಉತ್ತೇಜಿಸುತ್ತೇವೆ.
- ಸಾಮಾಜಿಕ ಸಮಾನತೆ, ಆರ್ಥಿಕ ಅಭಿವೃದ್ಧಿ ಮತ್ತು ಜನರನ್ನು ಕೇಂದ್ರವಾಗಿರಿಸಿಕೊಂಡಿರುವ ತಾಂತ್ರಿಕ ಅನ್ವೇಷಣೆಗಳಂತಹ ವಿಶಾಲ ಸಮಸ್ಯೆಗಳೊಂದಿಗೆ ತಳುಕುಹಾಕಿಕೊಂಡಿರುವಂತಹ ವಿಷಯಗಳನ್ನು ಹೊಂದಿರುವ ಪ್ರಸ್ತಾಪನೆಗಳನ್ನು ಎದುರುನೋಡುತ್ತಿದ್ದೇವೆ.
- ವಾಸ್ತವ ನೆಲೆಗಟ್ಟಿನ ಪಾಲುದಾರರನ್ನು ಒಳಗೊಳ್ಳುವ, ಅಂತರ್ ಶಿಸ್ತೀಯ ವಿಧಾನಗಳನ್ನು ಅಳವಡಿಸಿಕೊಂಡಿರುವ ಅಂತರ್- ಸಾಂಸ್ಥಿಕ ಸಹಯೋಗಗಳನ್ನು ಉತ್ತೇಜಿಸಲಾಗುತ್ತದೆ.
ಬಿಎಸ್‌ಎಫ್‌ನ ಕಿರು ಅನುದಾನ ಯೋಜನೆಯು ವಿಭಿನ್ನ ವಲಯಗಳ ಪರಿಣಿತ ಜನರು ಹಾಗೂ ಉಪಾಯಗಳನ್ನು ಒಗ್ಗೂಡಿಸುವ ರೀತಿಯಲ್ಲಿ ರೂಪುಗೊಂಡಿದೆ. ಇದು ಬೇರೆ ಬೇರೆ ಕ್ಷೇತ್ರಗಳ ವೃತ್ತಿಪರರ ಸಹಯೋಗವನ್ನು ಎದುರು ನೋಡುತ್ತದೆ. ಸ್ಥಳೀಯ ಮಟ್ಟದಲ್ಲಿ – ಸ್ಥಿತಿಸ್ಥಾಪಕತ್ವ ಸಮುದಾಯಗಳನ್ನು ನಿರ್ಮಿಸುವಲ್ಲಿ ವಿಭಿನ್ನವಾಗಬಲ್ಲ ಹೊಸತನದ ಮತ್ತು ಪರಿಣಾಮಕಾರಿಯಾದ ಪ್ರಸ್ತಾಪನೆಗಳನ್ನು ಎದುರು ನೋಡುತ್ತಿದ್ದೇವೆ!
- ಪ್ರಸ್ತಾವನೆಗಳು, ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿಸ್ತಾಪಕತ್ವದ ಆಯಾಮಗಳನ್ನು ಪ್ರತ್ಯಕ್ಷವಾಗಿಯಾಗಲೀ ಅಥವಾ ಇನ್ನಾವುದೋ ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಸಂಯೋಗವಾಗಿಯಾಗಲೀ ಉದ್ದೇಶಿಸಿರಬೇಕು.
- ಪ್ರಸ್ತಾಪಿತ ಯೋಜನೆಯು ಕನಿಷ್ಠ ಇಬ್ಬರು ಸಹಯೋಗಿಗಳನ್ನು ಒಳಗೊಂಡಿರಬೇಕು ಮತ್ತು ಅವುಗಳಲ್ಲಿ ಒಂದಾದರೂ ನೋಂದಾಯಿತ ಸಂಸ್ಥೆಯಾಗಿರಬೇಕು.
- ಯೋಜನೆಗಳು ಸಮುದಾಯಗಳನ್ನು ತೊಡಗಿಸಿಕೊಳ್ಳುವ ಅಂಶವನ್ನು ಪ್ರಮುಖವಾಗಿ ಹೊಂದಿರಬೇಕು. ಇದು ಪಾಲ್ಗೊಳ್ಳುವಿಕೆ ಹಾಗೂ ಸ್ಥಳೀಯವಾಗಿ ಚಾಲಿತವಾಗುವ ಪರಿಹಾರಗಳ ಮೇಲೆ ಒತ್ತು ನೀಡುವಂತಿರಬೇಕು.
- ಬೇರೆ ಬೇರೆ ಸಮಯ ಸಂದರ್ಭಗಳಲ್ಲಿ ಪ್ರಾಯೋಗಿಕವಾಗಬಹುದಾದ, ವಿಸ್ತರಿಸಬಹುದಾದ ಮತ್ತು ಪುನರಾವರ್ತನೆ ಮಾಡಬಹುದಾದ ಯೋಜನೆಗಳಿಗೆ ನಾವು ಆದ್ಯತೆ ನೀಡುತ್ತೇವೆ.
- ಯೋಜನೆಗಳು ಪ್ರಾಥಮಿಕವಾಗಿ ಬೆಂಗಳೂರು ನಗರ ಹಾಗೂ ಹೊರವಲಯ ಕೇಂದ್ರೀಕೃತವಾಗಿರಬೇಕಾಗಿದ್ದರೂ, ಇಂತಹುದೇ ಸಂದರ್ಭಗಳಲ್ಲಿ ವಿಶಾಲ ನೆಲೆಯಲ್ಲಿ ಅನ್ವಯಿಸಬಹುದಾದವುಗಳನ್ನು ಪರಿಗಣಿಸಲಾಗುತ್ತದೆ.
- ಅನುದಾನದ ಕಾಲಾವಧಿ: 12 ತಿಂಗಳುಗಳವರೆಗೆ
- ಅನುದಾನದ ಮೊತ್ತ: ರೂಪಾಯಿ ಐದು ಲಕ್ಷದವರೆಗೆ (ಯೋಜನೆಯ ವ್ಯಾಪ್ತಿ ಮತ್ತು ವಿಧಾನವನ್ನು ಆಧರಿಸಿದೆ – ಪ್ರಯೋಗಾತ್ಮಕವಾಗಿ ಜಾರಿ ಮಾಡುವಿಕೆ, ಸಂಶೋಧನೆ, ಸಂವಹನ ಮತ್ತು ದಾಖಲೀಕರಣ)
- ಇಲ್ಲಿಂದ ಅರ್ಜಿಯನ್ನು ತುಂಬಿರಿ.
- 2025ರ ಮೇ 5ರ ಮೊದಲು ಅರ್ಜಿಯನ್ನು ಸಲ್ಲಿಸಿರಿ.
- ಅಂತಿಮಸುತ್ತಿಗೆ ಆಯ್ಕೆ ಮಾಡಿದ ಪ್ರಸ್ತಾಪನೆಗಳ ಬಗ್ಗೆ ಮಾಹಿತಿಯನ್ನು 2025ರ ಜೂನ್ 15ರ ವೇಳೆಗೆ ಪ್ರಕಟಿಸಬಹುದು.
- ಆಯ್ಕೆಯಾದ ಅರ್ಜಿದಾರರನ್ನು ಅಂತಿಮ ಆಯ್ಕೆ ಸುತ್ತಿನಲ್ಲಿ ತಮ್ಮ ಪ್ರಸ್ತಾಪನೆಗಳನ್ನು ವಿವರಿಸಲು ಆಹ್ವಾನಿಸಲಾಗುವುದು.
- ಯೋಜನೆಗಳು 2025ರ ಸೆಪ್ಟೆಂಬರ್ – ಅಕ್ಟೋಬರ್ ವೇಲೆಗೆ ಆರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಯಾವುದಾದರೂ ಪ್ರಶ್ನೆಗಳಿದ್ದಲ್ಲಿ ಅಥವಾ ಯಾವುದಾದರೂ ಸ್ಪಷ್ಟನೆಗಳು ಬೇಕಿದ್ದಲ್ಲಿ ಸಂಪರ್ಕಿಸಿ: bsf@ncbs.res.in
ನೀವು ಅಥವಾ ನಿಮ್ಮ ಸಂಸ್ಥೆಯು ಮೇಲಿನ ಸಮಸ್ಯೆಗಳನ್ನು ಬಗೆಹರಿಸಲು ಬಲಿಷ್ಠವಾದ ಅಂತರ್-ಶಿಸ್ತೀಯ ಉಪಾಯಗಳನ್ನು ಹೊಂದಿದ್ದರೂ ಬೇಕಾದ ಪರಿಣಿತಿಯಿರುವ ಸಹಯೋಗಿಗಳು ಇನ್ನೂ ದೊರೆತಿಲ್ಲದಿದ್ದರೆ, ಅರ್ಜಿಯನ್ನು ಸಲ್ಲಿಸುವ ಮುಂಚಿನಿಂದಲೇ ಸಂಪರ್ಕದಲ್ಲಿರಬಹುದಾಗಿದೆ
ಕಿರು ಅನುದಾನ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಭೇಟಿ ಕೊಡಿ: http://www.bengalurusustainabilityforum.org/small-grants/
ಬೆಂಗಳೂರು ಸಸ್ಟೆನೆಬಿಲಿಟಿ ಫೋರಮ್ ಬಗ್ಗೆ : ಬೆಂಗಳೂರು ಸಸ್ಟೈನೆಬಿಲಿಟಿ ಫೋರಮ್ ಎಂಬುದು, ಬೆಂಗಳೂರಿನ ನಗರ ಮತ್ತು ಗಡಿ ನಗರ ಸುಸ್ಥಿರತೆಯ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಬಹು-ಸಾಂಸ್ಥಿಕ ಉಪಕ್ರಮವಾಗಿದೆ. ನಗರದಲ್ಲಿ ಸುಸ್ಥಿರತೆಯ ಸಮಸ್ಯೆಗಳು ಮತ್ತು ನಾವೀನ್ಯತೆಯ ಪರಿಹಾರಗಳ ಬಗೆಗಿನ ಸಮಗ್ರ ತಿಳಿದುಕೊಳ್ಳುವಿಕೆಯನ್ನು ಪೋಷಿಸುವ ಗುರಿಯೊಂದಿಗೆ, ನಾವು ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಅಭ್ಯಾಸಕಾರರಿಂದ ಸಾಮಾಜಿಕ ವಕೀಲರು ಮತ್ತು ನಾಗರಿಕರವರೆಗೆ ವಿವಿಧ ಮಧ್ಯಸ್ಥಗಾರರನ್ನು ಒಳಗೊಂಡ ಅಂತರಶಿಸ್ತೀಯ ಸಂಭಾಷಣೆಗಳು ಮತ್ತು ಸಹಯೋಗಗಳನ್ನು ನಿರ್ವಹಿಸುತ್ತೇವೆ. ಈ ಕಿರು ಅನುದಾನ ಯೋಜನೆಯು, ಬಿಎಸ್ಎಫ್‌ನ ಉದ್ದೇಶಗಳಿಗೆ ಹೊಂದಿಕೆಯಾಗುವ ಕೆಲವು ಯೋಜನೆಗಳಿಗೆ, ದೃಷ್ಟಿಕೋನಗಳಿಗೆ ಮತ್ತು ಕಾರ್ಯವಿಧಾನಗಳಿಗೆ ಮೂಲನಿಧಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಬಿಎಸ್‌ಎಫ್‌ನ ಕಿರು ಅನುದಾನ ಯೋಜನೆಯ ಬಗ್ಗೆ : ಬಿಎಸ್ಎಫ್ ಕಿರು ಅನುದಾನ ಕಾರ್ಯಕ್ರಮ ಎನ್ನುವುದು ಸ್ಥಳೀಯ, ನಾವೀನ್ಯತೆಯ, ಅಂತರ್ ಶಿಸ್ತಿನ, ಸುಸ್ಥಿರತೆಯ ಭವಿಷ್ಯವನ್ನು ಹೊಂದುವಂತಹ ಸಹಯೋಗಿ ಯೋಜನೆಗಳು ಆರಂಭವಾಗುವುದನ್ನು ಬೆಂಬಲಿಸುವ ಒಂದು ಪ್ರಯತ್ನವಾಗಿದೆ. ಯೋಜನೆಗಳು ಪ್ರಾಥಮಿಕವಾಗಿ ಈ ಕೆಳಗಿನ ಒಂದು ಅಥವಾ ಹೆಚ್ಚಿನ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಉದ್ದೇಶಿಸಿರಬೇಕು: ನಗರದ ಜೀವವೈವಿಧ್ಯ, ನಗರದ ನೀರು, ನಗರದ ಹವಾಮಾನ ಬದಲಾವಣೆ, ನಗರದ ತ್ಯಾಜ್ಯ. ಕಿರು ಅನುದಾನದ ಕಾರ್ಯಕ್ರಮಗಳಿಂದ ಬೆಂಬಲ ಪಡೆದ ಕಾರ್ಯಗಳು ಒಂದು ಆಸಕ್ತಿಕರ ಉಪಾಯಗಳ ಮತ್ತು ನಾವೀನ್ಯತೆಯ ಸ್ವರೂಪಗಳ ವಿಸ್ತಾರವಾದ ಹರವನ್ನು ಹೊಂದಿರುತ್ತದೆ; ಆ ಮೂಲಕ ನಮ್ಮ ನಗರದ ಸಲುವಾಗಿರುವ ಪ್ರಭಾವಶಾಲಿಯಾದ ಆಳ ಅಗಲಗಳ ಹಸ್ತಕ್ಷೇಪಗಳನ್ನು ಸಾಧಿಸುತ್ತವೆ. ಈ ಹಿಂದಿನ ಯೋಜನೆಗಳ ಕೆಲವು :
- ಅಳವಡಿಸಿಕೊಂಡಿದ್ದ ಕಾರ್ಯವಿಧಾನಗಳಲ್ಲಿ ಒಳಗೊಂಡಿದ್ದ ಅಂಶಗಳು: ಗುಣಾತ್ಮಕ ಮತ್ತು ಪರಿಮಾಣಾತ್ಮಕ | ದತ್ತಾಂಶ ಸಂಗ್ರಹ | ಕ್ರಿಯಾ ಸಂಶೋಧನೆ | ವಿನ್ಯಾಸ ಆಧಾರಿತ ಸಂಶೋಧನಾ ಸಮುದಾಯದ ವಿಸ್ತಾರ | ಪಾಲ್ಗೊಳ್ಳುವಿಕೆಯುಳ್ಳ ವಿಧಾನಗಳು | ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರಗಳು | ನಾಗರಿಕ ವಿಜ್ಞಾನ.
- ಪ್ರಮುಖ ಹೊರಪಡಿಕೆಗಳು ಈ ಸ್ವರೂಪವನ್ನು ಪಡೆದುಕೊಂಡವು: ಪುಸ್ತಕಗಳು | ಕ್ಷೇತ್ರ ಕೈಪಿಡಿಗಳು | ಪೋಸ್ಟರ್‌ಗಳು | ಆಟಗಳು/ ಕವಿತೆಗಳು | ಭಿತ್ತಿಚಿತ್ರಗಳು | ಚಿತ್ರಗಳು | ಲೇಖನಗಳು/ ಸಂಶೋಧನಾ ಪ್ರಕಾಶನಗಳು | ಆಪ್‌ಗಳು | ವರದಿಗಳು | ಬ್ಲಾಗ್‌ಗಳು/ ಜಾಲತಾಣಗಳು